Saturday, 13 August 2011

ಜೀವನ


ಜೀವನ ಒಂದು ಗಾಯನ
ಹುಟ್ಟಿದಾಗ ಲಾಲಿ ಗೀತೆ
ಬಾಲ್ಯದಲ್ಲಿ ಭಕ್ತಿ ಗೀತೆ
ಹರೆಯದಲ್ಲಿ ಪ್ರಣಯ ಗೀತೆ
ಮುಪ್ಪಿನಲ್ಲಿ ವೇದಾಂತ ಗೀತೆ
ಅಂತ್ಯದಲ್ಲಿ ಶೋಕ ಗೀತೆ
                   - ಗಿರೀಶ್ ಕೌಶಿಕ್    
                      ಸಿ.ಇ.ಸಿ

Sunday, 10 July 2011

ಮುಸುಕು

ಮಂಜಿನ ಮುಸುಕಿನಲಿ ಕಾಣದ ದಾರಿಯಲಿ
ಇಣುಕಿ ನೋಡುವ ಸೂರ್ಯನ ರಶ್ಮಿಯಲಿ |
ಹಕ್ಕಿಗಳ ಇಂಚರ ಹರಿವ ನೀರ ಸಂಚಾರ
ನುಡಿಸಿದೆ ಸಂಗೀತದ ಝೇಂಕಾರ ||
ಹಸಿರು ಬೆಟ್ಟಗಳ ರಮ್ಯ ನೋಟ
ಮುದ ನೀಡುವ ತಂಗಾಳಿಯಾಟ
ಪ್ರಕೃತಿ ಸೌಂದರ್ಯದ ಮಡಿಲಲ್ಲಿ ನಾ ಕರಗಿದೆ
ನನ್ನನ್ನೇ ಮರೆಸಿದೆ ತನ್ನಲ್ಲೇ ಬೆರೆಸಿದೆ | 

Monday, 13 June 2011

ಮುಂಗಾರು ಮಳೆ

ಬಂದಿದೆ ಮುಂಗಾರು ಮಳೆ
ತಂದಿದೆ ಹರ್ಷದ ಹೊಳೆ 
ಹೊಲ ಗದ್ದೆಗಳಿಗೆ ಜೀವಕಳೆ 
ರೈತರಿಗೆ ಒಳ್ಳೆಯ ಬೆಳೆ
ಮುಖದಲ್ಲಿ ಸಂತಸದ ಖಳೆ.
                    -ಗಿರೀಶ್ ಕೌಶಿಕ್
                      ಸಿ.ಇ.ಸಿ  

Friday, 10 June 2011

ನಲ್ಲೆ

ಓ ನನ್ನ ನಲ್ಲೆ 
ನೀ ಕಂಡ ಕ್ಷಣದಲ್ಲೇ
ನಾ ನಿನಗೆ ಮರುಳಾದೆನಲ್ಲೇ 
ನನ್ನ ಮನದಲ್ಲಿ ಮನೆ ಮಾಡಿಹೆಯಲ್ಲೇ 
ಮನದ ಇಂಗಿತ ಹೇಳಬಂದಾಗಲೇ 
ನನಗೆ ನಿನ್ನ ಭಾವನೆ ತಿಳಿಯಿತಲ್ಲೇ 
ನನಗೆ ತಿಳಿಸದೇ ಬೇರೊಬ್ಬನೊಂದಿಗೆ ಹೋದೆಯಲ್ಲೇ 
ಆದರೂ ನನ್ನ ಮನ ನಿನಗಾಗಿ ಮಿಡಿಯುತಿದೆಯಲ್ಲೇ 
ಮುಂದಿನ ಜನ್ಮದಲ್ಲಾದರೂ ಸೇರೋಣವೆಂದು ಬಯಸುವೆ 
ನನ್ನ ಮನದಲ್ಲೇ , ಮನದಲ್ಲೇ,ಮನಸಿನಾಳದಲ್ಲೇ .....
                              -ಗಿರೀಶ್ ಕೌಶಿಕ್ , 
                                  ಸಿ.ಇ.ಸಿ

Friday, 3 June 2011

ಮನುಜಧರ್ಮ

ಕಲ್ಲಾದರೆ ಶಿಲ್ಪಿಗೆ ಕೈಮುಗಿ
ಮಣ್ಣಾದರೆ ಕುಂಬಾರನಿಗೆ ಕೈಮುಗಿ
ಮರವಾದರೆ ನಿನ್ನ ಕಾಯುವರಿಗೆ ಕೈಮುಗಿ
ಎಲ್ಲರಿಗೆ ಉಪಕಾರಿಯಾಗಿ ಬಾಳುವಂತಾಗಲು    
ದೇವರಿಗೆ ಕೈಮುಗಿ
                       -ಗಿರೀಶ್ ಕೌಶಿಕ್
                     

ಸಾಗರ

ಸಾಗರ ಸಾಗರ ಅದು ನೀರಿನ ಆಗರ 
ಅಲೆ ಅಲೆಯಲೂ ಝುಳು ಝುಳು ಅಬ್ಬರ 
ಜಲತರಂಗದ ಸಂಗೀತ ಸ್ವರ 
ಕಣ್ಗಳಿಗೆ ಸುಂದರ, ಕಿವಿಗಳಿಗೆ ಸುಮಧುರ 
ಎದೆಯಲ್ಲಿ ಹೊಮ್ಮಿದೆ ಝೇಂಕಾರ ಝೇಂಕಾರ ಝೇಂಕಾರ!

                       -ಗಿರೀಶ್ ಕೌಶಿಕ್

Thursday, 2 June 2011

ಭಾರತ ನಾರಿ

ಒಹ್ ಭಾರತ ನಾರಿ 
ಸೀರೆಯಲ್ಲಿ ನೀನೆಷ್ಟು ಸುಂದರಿ!
ಹೋಲಿಸಲು ಯಾರೂ ಇಲ್ಲ ಮಾದರಿ 
ನಿನಗೆ ನೀನೆ ಸಾಟಿ ಅದೇ ಸರಿ !

             -ಗಿರೀಶ್ ಕೌಶಿಕ್